ಇವನ ಹಿಡಿದುಕೊಂಡು ಹೊಗೆಲೋ ಜೋಗಿ
ಕೀರ್ತನಕಾರರು : ಪುರಂದರದಾಸರು
ರಾಗ : ನಾದನಾಮಕ್ರಿಯೆ
ತಾಳ : ಆದಿ
ಇವನ ಹಿಡಿದುಕೊಂಡು ಹೊಗೆಲೋ ಜೋಗಿ ।।ಪ।।
ಇವ ನಮ್ಮ ಮಾತ ಕೇಳದೆ ಪುಂಡನಾದ ।।ಅ.ಪ।।
ಆಡುತಾಡುತ ಹೋಗಿ ನೀರೊಳು ಮುಳುಗಿದ
ಬೇಡವೆಂದರೆ ಬೆಟ್ಟ ಬೆನ್ನಲ್ಲಿ ಹೊತ್ತ
ದಾಡೆಯ ಮೇಲೆ ತಾ ಧಾರಿಣಿ ನೆಗಹಿದ
ಹಿಡಿಯ ಹೋದರೆ ಬಾಯ ತೆರೆದು ಅಂಜಿಸಿದ ।।೧।।
ಹುಲ್ಲಲಿ ವಿಪ್ರನ ಕಣ್ಣ ತಿವಿದ ಬುದ್ಧಿ
ಇಲ್ಲೆಂದರೆ ಕೈಲಿ ಕೊಡಲಿಯ ಪಿಡಿದ
ಬಿಲ್ಲು ಹಿಡಿದು ರಾಕ್ಷಸರನು ಸವರಿದ
ಬಲ್ಲಿದ ಮಾವನ ಶಿರವನ್ನು ತರಿದ ।।೨।।
ಬತ್ತಲೆ ಕುದುರೆಯ ಹತ್ತಬೇಡೆಂದರೆ
ಹತ್ತಿದನೋ ಇವ ಛಲದಿಂದ
ಭಕ್ತವತ್ಸಲ ಸಿರಿ ಪುರಂದರವಿಠಲ
ಎತ್ತಲಾದರೂ ಕೊಂಡು ಹೋಗೆಲೊ ಜೋಗಿ ।।೩।।
Labels: ಇವನ ಹಿಡಿದುಕೊಂಡು ಹೊಗೆಲೋ ಜೋಗಿ , Ivana Hididukondu Hogelo Jogi, ಪುರಂದರದಾಸರು, Purandaradasaru
ಕೀರ್ತನಕಾರರು : ಪುರಂದರದಾಸರು
ರಾಗ : ನಾದನಾಮಕ್ರಿಯೆ
ತಾಳ : ಆದಿ
ಇವನ ಹಿಡಿದುಕೊಂಡು ಹೊಗೆಲೋ ಜೋಗಿ ।।ಪ।।
ಇವ ನಮ್ಮ ಮಾತ ಕೇಳದೆ ಪುಂಡನಾದ ।।ಅ.ಪ।।
ಆಡುತಾಡುತ ಹೋಗಿ ನೀರೊಳು ಮುಳುಗಿದ
ಬೇಡವೆಂದರೆ ಬೆಟ್ಟ ಬೆನ್ನಲ್ಲಿ ಹೊತ್ತ
ದಾಡೆಯ ಮೇಲೆ ತಾ ಧಾರಿಣಿ ನೆಗಹಿದ
ಹಿಡಿಯ ಹೋದರೆ ಬಾಯ ತೆರೆದು ಅಂಜಿಸಿದ ।।೧।।
ಹುಲ್ಲಲಿ ವಿಪ್ರನ ಕಣ್ಣ ತಿವಿದ ಬುದ್ಧಿ
ಇಲ್ಲೆಂದರೆ ಕೈಲಿ ಕೊಡಲಿಯ ಪಿಡಿದ
ಬಿಲ್ಲು ಹಿಡಿದು ರಾಕ್ಷಸರನು ಸವರಿದ
ಬಲ್ಲಿದ ಮಾವನ ಶಿರವನ್ನು ತರಿದ ।।೨।।
ಬತ್ತಲೆ ಕುದುರೆಯ ಹತ್ತಬೇಡೆಂದರೆ
ಹತ್ತಿದನೋ ಇವ ಛಲದಿಂದ
ಭಕ್ತವತ್ಸಲ ಸಿರಿ ಪುರಂದರವಿಠಲ
ಎತ್ತಲಾದರೂ ಕೊಂಡು ಹೋಗೆಲೊ ಜೋಗಿ ।।೩।।
Labels: ಇವನ ಹಿಡಿದುಕೊಂಡು ಹೊಗೆಲೋ ಜೋಗಿ , Ivana Hididukondu Hogelo Jogi, ಪುರಂದರದಾಸರು, Purandaradasaru
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ