ಪರದೇಶಿ ನೀನು ಸ್ವದೇಶಿ ನಾನು
ಕೀರ್ತನಕಾರರು : ವಿಜಯದಾಸರು
ರಾಗ : ಕಾಂಬೋದಿ
ತಾಳ : ಝಂಪೆ
ಪರದೇಶಿ ನೀನು ಸ್ವದೇಶಿ ನಾನು ।।ಪ॥
ಪರಮ ಭಾಗವತರ ಬಾ ಹೋಗಿ ಕೇಳೋಣ ।।ಅ.ಪ॥
ಎನಗೆ ಜನಕನು ನೀನು ನಿನಗಾವ ಜನಕನೊ
ಜನನಿ ಇಂದಿರೆದೇವಿ ನಿನಗಾವಳೋ
ವನಜಪೀಠನು ಭ್ರಾತ ನಿನಗಾವ ಭ್ರಾತನೋ
ಇನ ಸೋಮ ಮಾತುಳರು ನಿನಗಾವ ಮಾತುಳರೊ ।।೧।।
ಸುರನದೀ ಅಗ್ರಜಳು ನಿನಗೆ ಅಗ್ರಜಳಾರು
ಶರನಿಧಿ ಭಾವ ನಿನಗಾರು ಭಾವ
ಸ್ಮರನು ಕಿರಿಸಹಭವನು ನಿನಗೆ ಸಹಭವನಾರೊ
ಸುರರು ಬಂಧುಗಳೆನಗೆ ನಿನಗಾರು ಬಾಂಧವರೊ ।।೨।।
ವರ ಇಳಾ ಸಾಮಾತೆ ನಿನಗೆ ಸಾಮಾತೆ ಯಾರೊ
ಮರುತ ದೇವರು ಗುರು ನಿನಗಾರು ಗುರುವೊ
ಸಿರಿಯರಸ ವಿಜಯವಿಠ್ಠಲರೇಯನೆ ನಿನ್ನ
ಚರಣಸೇವಕ ನಾನು ನೀನಾರ ಸೇವಕನೊ ।।೩।।
Labels: ಪರದೇಶಿ ನೀನು ಸ್ವದೇಶಿ ನಾನು, Paradesi Ninu Svadeshi Nanu, ವಿಜಯದಾಸರು, Vijayadasaru
ಕೀರ್ತನಕಾರರು : ವಿಜಯದಾಸರು
ರಾಗ : ಕಾಂಬೋದಿ
ತಾಳ : ಝಂಪೆ
ಪರದೇಶಿ ನೀನು ಸ್ವದೇಶಿ ನಾನು ।।ಪ॥
ಪರಮ ಭಾಗವತರ ಬಾ ಹೋಗಿ ಕೇಳೋಣ ।।ಅ.ಪ॥
ಎನಗೆ ಜನಕನು ನೀನು ನಿನಗಾವ ಜನಕನೊ
ಜನನಿ ಇಂದಿರೆದೇವಿ ನಿನಗಾವಳೋ
ವನಜಪೀಠನು ಭ್ರಾತ ನಿನಗಾವ ಭ್ರಾತನೋ
ಇನ ಸೋಮ ಮಾತುಳರು ನಿನಗಾವ ಮಾತುಳರೊ ।।೧।।
ಸುರನದೀ ಅಗ್ರಜಳು ನಿನಗೆ ಅಗ್ರಜಳಾರು
ಶರನಿಧಿ ಭಾವ ನಿನಗಾರು ಭಾವ
ಸ್ಮರನು ಕಿರಿಸಹಭವನು ನಿನಗೆ ಸಹಭವನಾರೊ
ಸುರರು ಬಂಧುಗಳೆನಗೆ ನಿನಗಾರು ಬಾಂಧವರೊ ।।೨।।
ವರ ಇಳಾ ಸಾಮಾತೆ ನಿನಗೆ ಸಾಮಾತೆ ಯಾರೊ
ಮರುತ ದೇವರು ಗುರು ನಿನಗಾರು ಗುರುವೊ
ಸಿರಿಯರಸ ವಿಜಯವಿಠ್ಠಲರೇಯನೆ ನಿನ್ನ
ಚರಣಸೇವಕ ನಾನು ನೀನಾರ ಸೇವಕನೊ ।।೩।।
Labels: ಪರದೇಶಿ ನೀನು ಸ್ವದೇಶಿ ನಾನು, Paradesi Ninu Svadeshi Nanu, ವಿಜಯದಾಸರು, Vijayadasaru
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ