ಶುಕ್ರವಾರ, ಆಗಸ್ಟ್ 30, 2013

ಭಕುತಿಯಾ ಬೇಡುವೇ ಮುಕುತರೊಡೆಯ : Bhakutiya Beduve Mukutarodeya

ಭಕುತಿಯಾ ಬೇಡುವೇ ಮುಕುತರೊಡೆಯ

ಕೀರ್ತನಕಾರರು : ಶ್ರೀ ಉರಗಾದ್ರಿವಾಸ ವಿಠ್ಠಲದಾಸರು
ರಾಗ :  ಮುಖಾರಿ 

ತಾಳ : ಆದಿ 

ಭಕುತಿಯಾ ಬೇಡುವೇ 
ಮುಕುತರೊಡೆಯ ನಿನ್ನ ಪದಪಂಕಜದೊಳು            ।।ಪ॥ 

ಬಾರಿಬಾರಿಗೆ ನಿನ್ನ ನಾಮವ 
ಸಾರಿಸ್ಮರಿಸಲು ದಾರಿಯ ಕಾಣೆನೋ 
ಮಾರಮಣನೆ ದಯೆತೋರದಿರಲು ಇ 
ನ್ಯಾರಿಗೆ ಮೊರೆಯಿಡಲಯ್ಯಾ ಶ್ರೀ ಹರೇ                  ।।೧।।

ಘನ್ನದುರಿತಗಳಿಂದ ಹಿಂದೆ ನಾ 
ಬನ್ನಪಟ್ಟು ಬಹು ಖಿನ್ನನಾಗಿಹೆ 
ಸನ್ನುತಾಂಗ ಶ್ರೀನಲ್ಲನೆ ನೀ 
ಇನ್ನು ಮನ್ನಿಸದಿರೆ ಇನ್ಯಾರಿಗೆ ಪೆಳಲೋ                 ।।೨।।

ಮಂಕುಮತಿಯಾಗಿದ್ದರೆನ್ನ ಹೃ 
ತ್ಪಂಕಜದೊಲಗೆ ಅಕಳಂಕನಾಗಿಹೆ 
ಶಂಕೆ ಏಕೋ ನಿನ್ನ ಕಿಂಕರನಲ್ಲವೇ 
ಸಂಕಟ ಹರಿಸೋ ಶ್ರೀ ವೆಂಕಟೇಶನೆ                      ।।೩।।

Labels: ಭಕುತಿಯಾ ಬೇಡುವೇ ಮುಕುತರೊಡೆಯ, Bhakutiya Beduve Mukutarodeya, ಶ್ರೀ ಉರಗಾದ್ರಿವಾಸ ವಿಠ್ಠಲದಾಸರು, SrI Uragadrivasa Vithaladasaru

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ