ಶನಿವಾರ, ಆಗಸ್ಟ್ 24, 2013

ಯಾತರವ ನಾನಯ್ಯ : Yatarava Nanayya

ಯಾತರವ ನಾನಯ್ಯ

ಕೀರ್ತನಕಾರರು : ಜಗನ್ನಾಥದಾಸರು
ರಾಗ :  ಕಾಂಬೋದಿ
ತಾಳ : ಝಂಪೆ


ಯಾತರವ ನಾನಯ್ಯ ಇಂದಿರೇಶ 
ಹೋತಾಹ್ವಯನೆ ನಿನ್ನಧೀನವೀ ಜಗವೆಲ್ಲ                         ।।ಪ॥ 

ಕಾಲಗುಣಕರ್ಮಸ್ವಭಾವಗಳ  ಮನೆಮಾಡಿ ಶ್ರೀ 
ಲೋಲ ನೀ ಸರ್ವರೊಳಗೆ ಇದ್ದು 
ಲೀಲೆಗೈಯುತ ಲಿಪ್ತನಾಗದೆ ನಿರಂತರದಿ 
ಪಾಲಿಸುವೆ ಸಂಹರಿಪೆ ದಿವಿಜದಾನವತತಿಯ                   ।।೧।।

ತಿಳಿಸಿಕೊಂಬುವ ನೀನೆ ಶ್ರುತಿಸ್ಮೃತಿಗಳೊಳಗಿದ್ದು 
ತಿಳಿಸುವವ ನೀನೆ ಉಪದೇಶಕರೊಳು 
ತಿಳಿವವನು ನೀನೆ ಬುದ್ಧ್ಯಾದಿಂದ್ರಿಯಗಳೊಳು 
ನೆಲೆಗೊಂಡು ನಿಖಿಳ ವ್ಯಾಪಾರಗಳ ಮಾಡುತಲಿಪ್ಪೆ           ।।೨।।

ಜಗದಿ ಜನ್ಮಾದಿಗಳಿಗೆಂತು ಕಾರಣನೆಂದು 
ನಿಗಮತತಿಗಳು ನಿತ್ಯಸ್ತುತಿಸುತಿಹವು 
ತ್ರಿಗುಣವರ್ಜಿತ ಜಗನ್ನಾಥವಿಠಲನು ನೀನು 
ಅಗಣಿತ ಕುಯೋನಿಮುಖದಲಿ ಬಂದವನು ನಾನು             ।।೩।।

Labels: ಯಾತರವ ನಾನಯ್ಯ, Yatarava Nanayya, ಜಗನ್ನಾಥದಾಸರು, Jagannathadasaru

2 ಕಾಮೆಂಟ್‌ಗಳು:

  1. Realistic song. We come to know our real position & ability after we understand real meaning of this song

    ಪ್ರತ್ಯುತ್ತರಅಳಿಸಿ
  2. ಯಾತರವ ನಾನಯ್ಯ ಇಂದಿರೇಶ
    ಹೋತಾಹ್ವಯನೆ ನಿನ್ನಧೀನವೀ ಜಗವೆಲ್ಲ ।।ಪ॥

    ಕಾಲಗುಣಕರ್ಮಸ್ವಭಾವಗಳ ಮನೆಮಾಡಿ ಶ್ರೀ
    ಲೋಲ ನೀನಿದ್ದು ಸರ್ವ ಜಗದಿ
    ಲೀಲೆಗೈಯುತ ಲಿಪ್ತನಾಗದೆ ನಿರಂತರದಿ
    ಪಾಲಿಸುವೆ ಸಂಹರಿಪೆ ದಿವಿಜದಾನವರ ।।೧।।

    ತಿಳಿಸಿಕೊಂಬುವ ನೀನೆ ಶ್ರುತಿಸ್ಮೃತಿಗಳೊಳಗಿದ್ದು
    ತಿಳಿಸುವವ ನೀನೆ ಉಪದೇಶಕರೊಳಗಿದ್ದು
    ತಿಳಿಯುವವ ನೀನೆ ಬುದ್ಧ್ಯಾದಿಂದ್ರಿಯಂಗಳೊಳಗಿದ್ದು
    ನೆಲೆಗೊಂಡು ನಿಖಿಳ ವ್ಯಾಪಾರಗಳ ಮಾಡುತಲಿಪ್ಪೆ ।।೨।।

    ಅಗಣಿತ‌ ಮಹಿಮ ಜಗದ್ ಜನ್ಮಾದಿ ಕಾರಣನೆ
    ತ್ರಿಗುಣವರ್ಜಿತ ತ್ರಿವಿಕ್ರಮ ತ್ರಿಧಾಮ ಭೃಗು ಮುನಿ ವಿನುತ ಜಗನ್ನಾಥವಿಠಲ ನಿನ್ನ ಪೊಗಳಿ ಹಿಗ್ಗುವ ಭಾಗ್ಯ ಕೊಡು ಜನುಮ ಜನುಮಕ್ಕು
    ।।೩।।

    ಪ್ರತ್ಯುತ್ತರಅಳಿಸಿ