ಬುಧವಾರ, ಆಗಸ್ಟ್ 21, 2013

ಲೊಳಲೊಟ್ಟೆ ಎಲ್ಲ ಲೊಳಲೊಟ್ಟೆ : Lolalotte Ella Lolalotte

ಲೊಳಲೊಟ್ಟೆ ಎಲ್ಲ ಲೊಳಲೊಟ್ಟೆ 

ಕೀರ್ತನಕಾರರು : ಪುರಂದರದಾಸರು  
ರಾಗ :  ಪೂರ್ವಕಲ್ಯಾಣಿ  
ತಾಳ : ಅಟ್ಟ

ಲೊಳಲೊಟ್ಟೆ ಎಲ್ಲ ಲೊಳಲೊಟ್ಟೆ                             ।।ಪ॥ 

ಆನೆ ಕುದುರೆ ಒಂಟೆ ಲೊಳಲೊಟ್ಟೆ ಬಹು 
ಸೇನೆ ಭಂಡಾರವು ಲೊಳಲೊಟ್ಟೆ 
ಮಾನಿನಿಯರ ಸಂಗ ಲೊಳಲೊಟ್ಟೆ ದೊಡ್ಡ 
ಕ್ಷೋಣಿಶನೆಂಬುದು ಲೊಳಲೊಟ್ಟೆ                             ।।೧।।

ಮುತ್ತು ಮಾಣಿಕ್ಯ ಲೊಳಲೊಟ್ಟೆ , ಚಿನ್ನ 
ಛತ್ರ ಚಾಮರ ಧ್ವಜ ಲೊಳಲೊಟ್ಟೆ 
ಸುತ್ತಗಳೂ ಕೋಟೆ ಲೊಳಲೊಟ್ಟೆ 
ಮತ್ತೆ ಉತ್ತಮ ಪ್ರಭುತ್ವ ಲೊಳಲೊಟ್ಟೆ                       ।।೨।।

ಕಂಟಕರೆಂಬೋರು ಲೊಳಲೊಟ್ಟೆ ನಿನ್ನ 
ನಂಟರು ಇಷ್ಟರು ಲೊಳಲೊಟ್ಟೆ 
ಉಂಟಾದ ಗುಣನಿಧಿ ಪುರಂದರವಿಠಲ 
ಬಂಟನಾಗದವ ಲೊಳಲೊಟ್ಟೆ                                  ।।೩।।

Labels: ಲೊಳಲೊಟ್ಟೆ ಎಲ್ಲ ಲೊಳಲೊಟ್ಟೆ, Lolalotte Ella Lolalotte, ಪುರಂದರದಾಸರು, Purandaradasaru

3 ಕಾಮೆಂಟ್‌ಗಳು:

  1. I am not sure what made Purandara Dasa to compose this song. There was a moment people of Vijayanagara were hating Aliya Rama Raya because he was putting only his relatives for the Key positions and he was arrogant. I am not sure if this made Purandara Dasa to compose this song.

    ಪ್ರತ್ಯುತ್ತರಅಳಿಸಿ
    ಪ್ರತ್ಯುತ್ತರಗಳು
    1. ಆಗಿರಲೂಬಹುದು ಅದೇ ರೀತಿ ಪುರಂದರದಾಸರು ಕೂಡಾ ಸಿರಿವಂತರಾಗಿ ಜಿಪುಣರಾಗಿದ್ದರು ಅವರು ಭೋಗವನ್ನು ತೊರೆದ ನಂತರ ಅವರಿಗೆ ಸಿಕ್ಕ ಅಲೌಕಿಕ ಅನುಭವದಿಂದ ಈ ಹಾಡು ಸೃಜಿಸಿರಬಹುದು

      ಅಳಿಸಿ