ಶುಕ್ರವಾರ, ಆಗಸ್ಟ್ 23, 2013

ಬಿಡೆನೊ ನಿನ್ನ ಚರಣಕಮಲವ ಎನ್ನ : Bideno Ninna Charanakamalava Enna

ಬಿಡೆನೊ ನಿನ್ನ ಚರಣಕಮಲವ ಎನ್ನ

ಕೀರ್ತನಕಾರರು : ವಾದಿರಾಜರು  
ರಾಗ :  ಕಲ್ಯಾಣಿ 
ತಾಳ : ಆಟ 

ಬಿಡೆನೊ ನಿನ್ನ ಚರಣಕಮಲವ ಎನ್ನ                    ।।ಪ॥ 

ಹೃದಯಮಧ್ಯದೊಳಿಟ್ಟು ಭಜಿಸುವೆ ಅನುದಿನ        ।।ಅ.ಪ॥

ಬಲಿಯ ದಾನವ ಬೇಡಿ ಅಳೆಯೆ ಬ್ರಹ್ಮಾಂಡವ 
ನಳಿನೋದ್ಭವ ಬಂದು ಪಾದವ ತೊಳೆಯೆ 
ಉಗುರಿನ ಕೊನೆಯಿಂದ ಉದಿಸಿದಳಾ ಗಂಗೆ 
ಹರಿಪಾದ ತೀರ್ಥವೆಂದು ಹರ ಧರಿಸಿದನಾಗ         ।।೧।।

ಆ ಪತಿಶಾಪದಿ ಅಹಲ್ಯೆ ಸಾಸಿರ ಯುಗ 
ಪಾಷಾಣವಾಗುತ್ತ ಪಥದೊಳಗಿರಲು 
ಶ್ರೀಪತಿ ನಿನ್ನಯ ಶ್ರೀಪಾದ ಸೋಕಲು 
ಪಾಪರಹಿತಳಾಗಿ ಪದವಿ ಕಂಡಳಾಗ                   ।।೨।।

ವಜ್ರಾಂಕುಶಧ್ವಜ ಪದುಮ ರೇಖೆಗಳಿಂದ 
ಪ್ರಜ್ವಲಿಸುವ ನಿನ್ನ ಪಾದಪದ್ಮವನು 
ಗರ್ಜಿಸಿ ಭಜಿಸುವೆ ಹಯವದನನೆ ಭವ-
ಜರಜರ ಬಿಡಿಸುವನೆಂದು ನಂಬಿಹೆನಾಗಿ               ।।೩।।

Labels: ಬಿಡೆನೊ ನಿನ್ನ ಚರಣಕಮಲವ ಎನ್ನ, Bideno Ninna Charanakamalava Enna, ವಾದಿರಾಜರು, Vadirajaru

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ