ಬುಧವಾರ, ಸೆಪ್ಟೆಂಬರ್ 11, 2013

ಆದದ್ದೆಲ್ಲ ಒಳಿತೇ ಆಯಿತು : Adaddella Olite Ayitu

ಆದದ್ದೆಲ್ಲ ಒಳಿತೇ ಆಯಿತು

ಕೀರ್ತನಕಾರರು : ಪುರಂದರದಾಸರು
ರಾಗ : ಪಂತುವರಾಳಿ
ತಾಳ : ಆದಿ

ಆದದ್ದೆಲ್ಲ ಒಳಿತೇ ಆಯಿತು ನಮ್ಮ
ಶ್ರೀಧರನ ಸೇವೆಗೆ ಸಾಧನ ಸಂಪತ್ತಾಯಿತು   ||ಪ||

ದಂಡಿಗೆ ಬೆತ್ತ ಹಿಡಿಯುವುದಕ್ಕೆ
ಮುಂಡೆ ಬಾಗಿ ನಾಚುತಲಿದ್ದೆ
ಹೆಂಡತಿ ಸಂತತಿ ಸಾವಿರ ವಾಗಲಿ
ದಂಡಿಗೆ ಬೆತ್ತ ಹಿಡಿಸಿದಳಯ್ಯ                      ||೧||

ಗೋಪಾಳ ಬುಟ್ಟಿ ಹಿಡಿಯುವುದಕ್ಕೆ
ಭೂಪತಿ ಎಂದು ಗರ್ವಿಸುತ್ತಿದ್ದೆ
ಆ ಪತ್ನೀಕುಲ ಸಾವಿರವಾಗಲಿ 
ಗೋಪಾಳ ಬುಟ್ಟಿ ಹಿಡಿಸಿದಳಯ್ಯ                 ||೨||

ತುಳಸೀ ಮಾಲೆ ಹಾಕುವುದಕ್ಕೆ
ಅರಸನೆಂದು ತಿರುಗುತಲಿದ್ದೆ
ಸರಸಿಜಾಕ್ಷ ಶ್ರೀ ಪುರಂದರ ವಿಠಲನು
ತುಳಸಿಮಾಲೆ ಹಾಕಿದನಯ್ಯ                      ||೩||

Labels: ಆದದ್ದೆಲ್ಲ ಒಳಿತೇ ಆಯಿತು, Adaddella Olite Ayitu, ಪುರಂದರದಾಸರು, Purandaradasaru

4 ಕಾಮೆಂಟ್‌ಗಳು: