ಬುಧವಾರ, ಸೆಪ್ಟೆಂಬರ್ 11, 2013

ಸ್ಮರಣೆ ಒಂದೇ ಸಾಲದೆ ಗೋವಿಂದನ : Smarane Onde Salade Govindana

ಸ್ಮರಣೆ ಒಂದೇ ಸಾಲದೆ ಗೋವಿಂದನ

ಕೀರ್ತನಕಾರರು : ಪುರಂದರದಾಸರು
ರಾಗ : ಅಠಾಣ
ತಾಳ : ಛಾಪು

ಸ್ಮರಣೆ ಒಂದೇ ಸಾಲದೆ ಗೋವಿಂದನ
ನಾಮ ಒಂದೇ ಸಾಲದೆ                               ||ಪ||

ಪರಮ ಪುರುಷನನ್ನು ನೆರೆ ನಂಬಿದವರಿಗೆ
ದುರಿತ ಬಾಧೆಗಳ ಗುರುತು ತೋರುವುದೆ        ||ಅ.ಪ||

ಕಡು ಮೂರ್ಖನಾದರೇನು ದುಷ್ಕರ್ಮದಿಂ
ತೊಡೆದಾತನಾದರೇನು
ಜಡನಾದರೇನಲ್ಪಜಾತಿಯಾದರೇನು
ಬಿಡದೆ ಪ್ರಹ್ಲಾದನ್ನ ಸಲಹಿದ ಹರಿಯ               ||೧||

ಪಾತಕಿಯಾದರೇನು ಸರ್ವಪ್ರಾಣಿ
ಘಾತಕಿಯಾದರೇನು
ನೀತಿಯ ಬಿಟ್ಟು ದುಷ್ಕರ್ಮಿಯಾದರೇನು
ಪ್ರೀತಿಯಿಂದಜಾಮಿಳನ ಸಲಹಿದ ಹರಿಯ        ||೨||

ಸಕಲ ತೀರ್ಥಯಾತ್ರೆಯ ಮಾಡಿದಂಥ
ನಿಖಿಲ ಪುಣ್ಯದ ಫಲವು
ಭಕುತಿ ಪೂರ್ವಕವಾಗಿ ಬಿಡದನುದಿನದಲ್ಲಿ
ಪ್ರಕಟ ಪುರಂದರವಿಠಲನ ನಾಮದ               ||೩||

Labels: ಸ್ಮರಣೆ ಒಂದೇ ಸಾಲದೆ ಗೋವಿಂದನ, Smarane Onde Salade Govindana, ಪುರಂದರದಾಸರು, Purandaradasaru

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ