ಬುಧವಾರ, ಸೆಪ್ಟೆಂಬರ್ 11, 2013

ಚಂದ್ರಚೂಡ ಶಿವ ಶಂಕರ : Chandrachuda Shiva Shankara

ಕ್ಷೀರಾಬ್ಧಿ ಕನ್ನಿಕೆ ಶ್ರೀಮಹಾಲಕ್ಷ್ಮಿ
ಚಂದ್ರಚೂಡ ಶಿವ ಶಂಕರ ಪಾರ್ವತಿ

ಕೀರ್ತನಕಾರರು : ಪುರಂದರದಾಸರು
ರಾಗ : ಧನ್ಯಾಸಿ
ತಾಳ : ಆದಿ

ಚಂದ್ರಚೂಡ ಶಿವ ಶಂಕರ ಪಾರ್ವತಿ ರಮಣನೆ ನಿನಗೆ ನಮೋ ನಮೋ       ||ಪ||

ಸುಂದರ ಮೃಗದರ ಪಿನಾಕಧರಹರ ಗಂಗಾಧರ ಶಿರ ಗಜ ಚರ್ಮಾಂಬರಧರ  ||ಅ.ಪ||

ನಂದಿ ವಾಹನಾನಂದಿಂದ ಮೂರ್ಜಗದಿ ಮೆರೆವನು ನೀನೆ
ಅಂದು ಅಮೃತ ಘಟದಿಂದುದಿಸಿದ ವಿಷ ತಂದು ಭುಜಿಸಿದವನು ನೀನೆ
ಕಂದರ್ಪನ ಕ್ರೋಧದಿಂದ ಕಣ್ತೆರದು ಕೊಂದ ಉಗ್ರನು ನೀನೆ
ಇಂದಿರೇಶ ಶ್ರೀ ರಾಮನ ಪಾದವ ಚಂದದಿ ಪೋಗಳುವನು ನೀನೆ           ||೧||

ಬಾಲ ಮೃಕಂಡನ ಕಾಲನು ಎಳೆವಾಗ ಪಲಿಸಿದವನು ನೀನೆ
ಕಾಲಕೂಟ ವಿಷವ ಪಾನ ಮಾಡಿದ ನೀಲಕಂಠ ನೀನೆ
ವಾಲಯದಿ ಕಪಾಲವ ಪಿಡಿದು ಭಿಕ್ಷೆ ಬೇಡೋ ದಿಗಂಬರನು ನೀನೆ
ಜಾಲ ಮಾಡುವ ಗೋಪಾಲನೆಂಬ ಪೆಣ್ಣಿಗೆ ಮರುಳಾದವನು ನೀನೆ          ||೨||

ಧರೆಗೆ ದಕ್ಷಿಣ ಕಾವೇರಿ ತೀರ ಕುಂಭಾಪುರ ನಿವಾಸನು ನೀನೆ
ಕರದಲಿ ವೀಣೆಯ ಗಾನವ ಮಾಡುವ ನಮ್ಮ ಉರಗ ಭೂಷಣನು
ಕೊರಳಲಿ ಭಸ್ಮ ರುದ್ರಾಕ್ಷಿ ಧರಿಸಿದ ಪರಮ ವೈಷ್ಣವನು ನೀನೆ
ಗರುಡ ಗಮನ ಶ್ರೀ ಪುರಂದರ ವಿಠಲಗೆ ಪ್ರಾಣ ಪ್ರಿಯನು ನೀನೆ            ||೩||

Labels: ಚಂದ್ರಚೂಡ ಶಿವ ಶಂಕರ, Chandrachuda Shiva Shankara, ಪುರಂದರದಾಸರು, Purandaradasaru

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ