ಬುಧವಾರ, ಸೆಪ್ಟೆಂಬರ್ 11, 2013

ಒಂದೇ ನಾಮವು ಸಾಲದೆ : Onde Namavu Salade

ಒಂದೇ ನಾಮವು ಸಾಲದೆ

ಕೀರ್ತನಕಾರರು : ಪುರಂದರದಾಸರು

ರಾಗ :  ನಾಟ
ತಾಳ : ಆದಿ

ಒಂದೇ ನಾಮವು ಸಾಲದೆ ಶ್ರೀ ಹರಿಯೆಂಬ
ಒಂದೇ ನಾಮವು ಸಾಲದೆ                                ||ಪ||

ಒಂದೇ ನಾಮವು ಭವಬಂಧನ ಬಿಡಿಸುವುದೆಂದು
ವೇದಂಗಳ ಆನಂದದಿ ಸ್ತುತಿಸುವ                       ||ಅ.ಪ||

ಉಭಯರಾಯರು ಸೇರಿ ಸಮ್ಮತದಿ ಲೆತ್ತವನಾಡಿ
ಸಭೆಯೊಳು ಧರ್ಮಜ ಸತಿಯ ಸೋಲೆ
ನಭಕೆ ಕೈಯೆತ್ತಿ ದ್ರೌಪದಿ ಕೃಷ್ಣಾ ಎನ್ನಲು
ಇಭರಾಜ ಗಮನೆಗೆ ಅಕ್ಷಯ ವಸ್ತ್ರವನಿತ್ತ               ||೧||

ಹಿಂದೊಬ್ಬ ಋಶಿ ಪುತ್ರನಂದು ದಾಸಿಯ ಕೂಡೆ
ಸಂದೇಹವಿಲ್ಲದೆ ಹಲವು ಕಾಲ
ದಂದುಗದೊಳು ಸಿಲುಕಿ ನಿಂದಂತ್ಯ ಕಾಲದಿ
ಕಂದ ನಾರಗನೆಂದು ಕರೆಯಲಭಯವಿತ್ತ              ||೨||

ಕಾಶಿಯಪುರದೊಳಗೆ ಈಶ ಭಕುತಿಯಿಂದ
ಸಾಸಿರ ನಾಮದ ರಾಮನೆಂಬ
ಶ್ರೀಶನ ನಾಮದ ಉಪದೇಶ ಸತಿಗಿತ್ತ
ವಾಸುದೇವ ಶ್ರೀ ಪುರಂದರ ವಿಠಲನ್ನ                  ||೩||

Labels: ಒಂದೇ ನಾಮವು ಸಾಲದೆ, Onde Namavu Salade, ಪುರಂದರದಾಸರು, Purandaradasaru

2 ಕಾಮೆಂಟ್‌ಗಳು: