ಬುಧವಾರ, ಸೆಪ್ಟೆಂಬರ್ 11, 2013

ಎನಗೂ ಆಣೆ ರಂಗ : Enagu Ane Ranga

ಎನಗೂ ಆಣೆ ರಂಗ ನಿನಗೂ ಆಣೆ

ಕೀರ್ತನಕಾರರು : ಪುರಂದರದಾಸರು

ರಾಗ : ಶಂಕರಾಭರಣ
ತಾಳ : ತ್ರಿವಿಡೆ

ಎನಗೂ ಆಣೆ ರಂಗ ನಿನಗೂ ಆಣೆ                                 ||ಪ||

ಎನಗೂ ನಿನಗೂ ಇಬ್ಬರಿಗೂ ಭಕ್ತರಾಣೆ                          ||ಅ.ಪ||

ನಿನ್ನ ಬಿಟ್ಟು ಅನ್ಯರ ಭಜಿಸಿದರೆನಗೆ ಆಣೆ ರಂಗ
ಎನ್ನ ನೀ ಕೈ ಬಿಟ್ಟು ಪೋದರೆ ನಿನಗೆ ಆಣೆ                       ||೧||

ತನುಮನಧನದಲಿ ವಂಚಕನಾದರೆ ನಿನಗೆ ಆಣೆ ರಂಗ
ಮನಸು ನಿನ್ನಲಿ ನಿಲಿಸದಿದ್ದರೆ ನಿನಗೆ ಆಣೆ                      ||೨||

ಕಾಕು ಮನುಜರ ಸಂಗವ ಮಾಡದಿದ್ದರೆ ಎನಗೆ ಆಣೆ ರಂಗ
ಲೌಕಿಕವ ಬಿಡಿಸದಿದ್ದರೆ ನಿನಗೆ ಆಣೆ                               ||೩||

ಶಿಷ್ಟರ ಸಂಗ ಮಾಡದಿದ್ದರೆ ಎನಗೆ ಆಣೆ ರಂಗ
ದುಷ್ಟರ ಸಂಗವ ಬಿಡಿಸದಿದ್ದರೆ ನಿನಗೆ ಆಣೆ                      ||೪||

ಹರಿ ನಿನ್ನಾಶ್ರಾಯ ಮಾಡದಿದ್ದರೆ ಎನಗೆ ಆಣೆ ರಂಗ
ಪುರಂದರವಿಠಲ ನೀನೊಲಿಯದಿದ್ದರೆ ನಿನಗೆ ಆಣೆ             ||೫||

Labels: ಎನಗೂ ಆಣೆ ರಂಗ, Enagu Ane Ranga, ಪುರಂದರದಾಸರು, Purandaradasaru

1 ಕಾಮೆಂಟ್‌:

  1. ಜೈ ಜೈ ರಾಮಕೃಷ್ಣ ಹರಿ
    ಕರುಣಾಮಯನಾದ ಶ್ರೀಹರಿಯು ನಿಮಗೆ ಆಯುರಾರೋಗ್ಯ ಐಶ್ವರ್ಯ ಧಿಗಳನ್ನು ಕರುಣಿಸಿ ಇಹ-ಪರ ದಲ್ಲಿ ಸೌಖ್ಯವನ್ನು ಉಂಟುಮಾಡಲಿ

    ಪ್ರತ್ಯುತ್ತರಅಳಿಸಿ