ಸೋಮವಾರ, ಸೆಪ್ಟೆಂಬರ್ 9, 2013

ಸಿಂಹರೂಪನಾದ ಶ್ರೀ ಹರಿ : Simharupanada Srihari

ಸಿಂಹರೂಪನಾದ ಶ್ರೀ ಹರಿ

ಕೀರ್ತನಕಾರರು : ಪುರಂದರದಾಸರು
ರಾಗ :  ಕೇದಾರ ಗೌಳ
ತಾಳ : ಆದಿ

ಸಿಂಹರೂಪನಾದ ಶ್ರೀ ಹರಿ ಹೇ ನಾಮಗಿರೀಶನೇ   ||ಪ||

ಒಮ್ಮನದಿಂದ ನಿಮ್ಮನು ಭಜಿಸಲು
ಸಮ್ಮತದಿಂದಲಿ ಕಾಯುವೆನೆಂದ ಹರಿ                ||ಅ.ಪ||

ತರಳನು ಕರೆಯೆ ಸ್ಥಂಭವು ಬಿರಿಯೇ
ತುಂಬಾ ಉಗ್ರವನು ತೋರಿದನು
ಕರುಳನು ಬಗೆದು ಕೊರಳೊಳಗಿಟ್ಟು
ತರಳನ ಸಲಹಿದ ಶ್ರೀ ನರಸಿಂಹನೆ                   ||೧||

ಭಕ್ತರೆಲ್ಲ ಕೂಡಿ ಬಹು ದೂರ ಓಡಿ
ಪರಮ ಶಾಂತವನು ಬೇಡಿದರು
ಕರೆದು ತನ್ನ ಸಿರಿಯನು ತೊಡೆಯೊಳು ಕುಳಿಸಿದ
ಪರಮ ಹರುಷವನು ಹೊಂದಿದ ಶ್ರೀ ಹರಿ           ||೨||

ಜಯ ಜಯ ಜಯವೆಂದು ಹೂವನು ತಂದು
ಹರಿ ಹರಿ ಹರಿಯೆಂದು ಸುರರೆಲ್ಲ ಸುರಿಸೆ
ಭಯ ನಿವಾರಣ ಭಾಗ್ಯ ಸ್ವರೂಪನೇ
ಪರಮ ಪುರುಶ ಶ್ರೀ ಪುರಂದರ ವಿಟ್ಟಲನೆ           ||೩||

Labels: ಸಿಂಹರೂಪನಾದ ಶ್ರೀ ಹರಿ, Simharupanada Srihari
, ಪುರಂದರದಾಸರು, Purandaradasaru

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ