ಸೋಮವಾರ, ಸೆಪ್ಟೆಂಬರ್ 9, 2013

ನೆರೆನಂಬಿದೆ ಮದ ಹೃದಯ : Nerenambide Mada Hridaya

ನೆರೆನಂಬಿದೆ ಮದ ಹೃದಯ

ಕೀರ್ತನಕಾರರು : ಪುರಂದರದಾಸರು

ನೆರೆನಂಬಿದೆ ಮದ ಹೃದಯ ಮಂಟಪದೊಳು
ಪರಿಶೋಭಿಸುತಿರು ಪಾಂಡುರಂಗ                 ||ಪ||

ಶರಣು ಜನರ ಸಂಸಾರ ಮಹಾ ಭಯ 
ಹರಣ ಕರುಣ ಸಿರಿ ಪಾಂಡುರಂಗ                 ||ಅ.ಪ||

ನೆರೆದಿಹ ಬಹುಜನರೋಳಿದ್ದರು ಮನ
ಸ್ಥಿರ ವಿಡು ನಿನ್ನಲಿ ಪಾಂಡುರಂಗ
ಪರಿ ಪರಿ ಕೆಲಸವು ನಿನ್ನ ಮಹಾಪೂಜೆ
ನಿರುತ ಎನಗೆ ಕೊಡು ಪಾಂಡುರಂಗ              ||೧||

ಪರದೇವನೆ ನಿನ್ನಾ ಲೀಲಾ ಸ್ಮೃತಿಯನು
ನಿರುತ ಎನಗೆ ಕೊಡು ಪಾಂಡುರಂಗ
ಪರರಾಪೇಕ್ಷೆಯ ಬಿಡಿಸಿ ನಿರಂತರ
ಪರಗತಿ ಪಥ ತೋರೋ ಪಾಂಡುರಂಗ            ||೨||

ಸುಖವಾಗಲಿ ಬಹು ದುಃಖವಾಗಲಿ
ಸಖನೀನಾಗಿರು ಪಾಂಡುರಂಗ
ನಿಖಿಲಾಂತರ್ಗತ ವ್ಯಾಸ ವಿಠಲ ತವ
ಮುಖ ಪಂಕಜ ತೋರೋ ಪಾಂಡುರಂಗ         ||೩||

Labels: ನೆರೆನಂಬಿದೆ ಮದ ಹೃದಯ, Nerenambide Mada Hridaya
, ಪುರಂದರದಾಸರು, Purandaradasaru

1 ಕಾಮೆಂಟ್‌: